•   Skip To Main   
  •      ಕನ್ನಡ
    View Web Site in English ವೆಬ್ ಸೈಟ್ ಕನ್ನಡದಲ್ಲಿ ವೀಕ್ಷಿಸಿ
  •     
  •     
  • A-
  • A
  • A+

Department Of Public Instruction

Government Of Karnataka

Department Of Public Instruction

Government Of Karnataka
  • About Department

    About Us

    • Mission
    • Organisation Structure
    • Administrative Structure
    • Academic Structure
    • District Overview

    Programs

    • School Nurturing
    • Mid Day Meals
    • SDMC

    CSR Activities

    • Namma Shale
    • CSR Activities

    Budget and Plan

    • Annual Budget
    • RIDF-25
    • MPIC
    • SDP
    • Meeting Proceedings

    Data Bank

    • UDISE Reports
    • Analytical Reports
    • Water and Toilet Facilities

    School Search

    • School Search
    • Check ICSE Schools List
    • Check CBSE Schools List

    Contact Us

    • CPI Office
    • DDPI & BEO Office
      Bangalore Division Mysore Division Dharwad Division Kalaburagi Division
  • Downloads

    Circulars

    • General
    • Compendium
    • Primary Education
    • Secondary Education

    Publications

    • Best Govt. Schools Reports
    • Shikshana Varthe
    • Other Publications

    Tenders

    • Office Tenders
    • SSA Tenders
    • Other Office tenders

    Forms and Procedures

    • Forms and Procedures

    Photo Gallery

    • Photo Gallery
  • Administration

    Service Matters

    • Teachers
    • Officers
    • Non Teaching Staff

    Transfer Information

    • Transfer Related Circulars
    • Group B Officers
    • Teachers
    • Non Teaching Staff

    Teachers Recruitment

    • Teachers Recruitment

    Right to Education

    • RTE Admissions
    • RTE Fee Reimbursement

    Right to Information Act[RTI]

    • Right to Information Act[RTI]

    SAKALA [GSC Act-2011]

    • SAKALA [GSC Act-2011]

    eGovernance

    • eGovernance
  • Home
  • Primary
  • Secondary
  • Minority
  • Mid Day Meals
  • S.W.F & T.B.F
  • C A Cell
  • SISLEP
ಇ-ಆಡಳಿತ ಇ ಎಮ್ ಐ ಎಸ್(ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ) ಸಚಿವಾಲಯ ವಾಹಿನಿ ಹೆಚ್.ಆರ್.ಎಂ.ಎಸ್. ಇತರೆ ತಂತ್ರಾಂಶಗಳು ಸುತ್ತೋಲೆಗಳು

ಹಿನ್ನೆಲೆ :

ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದ ಬಹಳ ಹಳೆಯದಾದ, ದೊಡ್ಡದಾದ, ಪ್ರಮುಖವಾದ ಇಲಾಖೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಶಾಲೆಗಳು, ಲಕ್ಷಾಂತರ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಇಲಾಖೆಯಡಿಯಲ್ಲಿ ಒಂದು ಕೋಟಿಗೂ ಮೀರಿ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಸಂವಿಧಾನದ 45ನೇ ಅನುಚ್ಛೇದದ ಪ್ರಕಾರ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ, ಗುಣಾತ್ಮಕ ಶಿಕ್ಷಣವನ್ನು ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಬದ್ಧ ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ ಇಲಾಖೆಯು ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸಹಯೋಗದೊಂದಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯನ್ನುಹಮ್ಮಿಕೊಂಡಿದ್ದು ನಿಗದಿತ ಅವಧಿಯಲ್ಲಿ ಗುರಿಯನ್ನು ಸಾಧಿಸಲು ಕಾರ್ಯಕ್ರಮವನ್ನು ನಿರೂಪಿಸಲಾಗಿದೆ. ಪ್ರತಿ ಮಗುವಿಗೂ ಪ್ರಾಥಮಿಕ ಶಿಕ್ಷಣವನ್ನು ನೀಡಲು ಶೇಕಡ 100 ರಷ್ಟು ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ರಾಜ್ಯವು ಇತ್ತೀಚಿನ ದಶಕಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ದೇಶದಲ್ಲಿಯೇ ಮೂಂಚೂಣಿಯಲ್ಲಿರುವ ರಾಜ್ಯ ಎಂದು ಪರಿಗಣಿಸಲಾಗಿದೆ.

ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಪ್ರೌಢಶಾಲೆಗಳಲ್ಲಿ ಹಾಗೂ ಅನುದಾನಿತ, ಅನುದಾನರಹಿತ ವಿಧ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾಹಿತಿ ಸಂಗ್ರಹ ಹಾಗೂ ಕ್ರೋಢಿಕರಣ ಮಾಡುವುದು ಹಾಗೂ ವಿದ್ಯಾರ್ಥಿಗಳ ತರಗತಿಗಳಿಗೆ ಅನುಗುಣವಾಗಿ ದಾಖಲಾತಿ, ಹಾಜರಾತಿ, ವಯಸ್ಸು, ಲಿಂಗ ಹಾಗೂ ವಿವಿಧ ಸಾಮಾಜಿಕ ಗುಂಪುಗಳನ್ನು ಆಧರಿಸಿ, ಅಂಕಿಅಂಶಗಳನ್ನು ಸಂಗ್ರಹಿಸುವುದು ಒಂದು ಸವಾಲಿನ ಕಾರ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಇಲಾಖೆಯು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ, ಇ-ಆಡಳಿತ ಘಟಕವನ್ನು ಇಲಾಖೆಯಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಆಡಳಿತದಲ್ಲಿ ವಸ್ತುನಿಷ್ಟವಾದ, ಪಾರದರ್ಶಕವಾದ ಮಾಹಿತಿಯನ್ನು ಅತೀ ವೇಗವಾಗಿ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ನೀಡುವುದರಲ್ಲಿ ಯಶಸ್ವಿಯಾಗಿದೆ.

ಇಲಾಖೆಯಲ್ಲಿ ಇ-ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಶೈಕ್ಷಣಿಕ ಉಪಗ್ರಹದ ಸಹಾಯದಿಂದ ಉಪಗ್ರಹ ಆಧಾರಿತ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ಕ್ಷೇತ್ರ ಹಂತದ ಅಧಿಕಾರಿಗಳಿಗೆ ನೀಡುವಲ್ಲಿ ಮತ್ತು ಪ್ರಗತಿಯನ್ನು ಅವಲೋಕನ ಮಾಡಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ಇಲಾಖೆಯು ಡಿ. ಎಸ್. ಇ ಆರ್.ಟಿ. ಬೆಂಗಳೂರಿನಲ್ಲಿ ತನ್ನದೇ ಆದ ಸ್ಟುಡಿಯೋವನ್ನು ಸ್ಥಾಪಿಸಿ, ಅಪ್ ಲಿಂಕ್ ವ್ಯವಸ್ಥೆಯನ್ನೂ ಸಹ ಮಾಡಿದೆ.ಕ್ಷಣಿಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಸಾರಮಾಡಲು ಜಿಲ್ಲೆ ಮತ್ತು ಬ್ಲಾಕ್ ಹಂತಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನೂ ಸಹ ಸ್ಥಾಪಿಸಲಾಗಿದೆ.

ಇ-ತಂತ್ರಜ್ಞಾನವನ್ನು ತರಗತಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ, ಮೊದಲ ಹಂತದಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಲೆಗಳನ್ನು, ಗುಲ್ಬರ್ಗಾ ಜಿಲ್ಲೆ 800 ಶಾಲೆಗಳನ್ನು ಹಾಗೂ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಒಂದು ಕ್ಲಸ್ಟರ್ ನಲ್ಲಿರುವ 18 ಶಾಲೆಗಳನ್ನು ಎಜುಸ್ಯಾಟ್ ಯೋಜನೆಗೆ ಒಳಪಡಿಸಲಾಯಿತು. ವಿವಿಧ ವಿಷಯಗಳಲ್ಲಿ ಬರುವ ಕ್ಲಿಷ್ಟ ಅಂಶಗಳನ್ನು ಹೊಂದಿರುವ ಅಧ್ಯಾಯಗಳನ್ನು ಗುರುತಿಸಿ, ವಿಷಯ ತಜ್ಞರಿಂದ ಅಧ್ಯಾಯಗಳನ್ನು ಈ ಶಾಲೆಗಳಲ್ಲಿ ಮಕ್ಕಳಲ್ಲಿ ಉತ್ತಮ ಕಲಿಕೆಯನ್ನು ಉಂಟುಮಾಡಲು ಪ್ರಸಾರ ಮಾಡಲಾಗುತ್ತಿದೆ. ಈ ಶಾಲೆಗಳು ಟಿ.ವಿ. ಮತ್ತು ಸ್ವೀಕೃತಿ ಕೇಂದ್ರವನ್ನು ಹೊಂದಿವೆ.

ಇ-ಆಡಳಿತವು ಮಾಹಿತಿ ಸಂವಹನ ತಂತ್ರಜ್ಞಾನವನ್ನು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬಳಸುವುದರ ಮೂಲಕ ಇಲಾಖೆಯು ನೀಡುವ ಸೇವೆಗಳನ್ನು ಉತ್ತಮವಾಗಿ ಮತ್ತು ಅತೀ ಶೀಘ್ರವಾಗಿ ಒದಗಿಸುವ ಮಹತ್ತರವಾದ ಆಶಯದೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಇ- ಆಡಳಿತದ ಉದ್ದೇಶಗಳು::

  • ಸಮಯಕ್ಕೆ ಸರಿಯಾಗಿ ವಸ್ತುನಿಷ್ಠ ವಿವರವಾದ ಮಾಹಿತಿಯನ್ನು ನೀಡುವುದು ಹಾಗೂ ಇದರಿಂದಾಗಿ ಆಡಳಿತಾಧಿಕಾರಿಗಳ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಮಾಹಿತಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯೋಗಿಸುವುದರ ಮೂಲಕ ಶಿಕ್ಷಕರು ಮತ್ತು ಮಕ್ಕಳಲ್ಲಿ ಶಿಕ್ಷಣದ ಗುಣಾತ್ಮಕತೆಯನ್ನು ಹೆಚ್ಚಿಸುವುದು.
  • ಪರಿಣಾಮಕಾರಿಯಾದ ಸಂವಹನ ಮಾಧ್ಯಮದ ಮೂಲಕ ಅತೀ ದೂರದ ಎಲ್ಲ ಪ್ರದೇಶಗಳಿಗೂ ತಂತ್ರಜ್ಞಾನದ ಬೆಳವಣಿಗೆಯನ್ನು ವಿಸ್ತರಿಸುವುದು.
  • ಇಲಾಖೆಯ ಆಡಳಿತದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಕಾರ್ಯವೈಖರಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು

ಇ-ಆಡಳಿತ ಯೋಜನೆಗಳ ಅನುಷ್ಟಾನ ಪೂರ್ವದ ಇಲಾಖಾ ಹಿನ್ನೋಟ:

  • ಇಲಾಖೆಯ ಪ್ರತಿ ಕಛೇರಿಗಳಲ್ಲಿ ಸ್ವೀಕರಿಸುವ ಪತ್ರಗಳ ವಿವರಗಳನ್ನು ಪತ್ರ ಸ್ವೀಕೃತಿ ರಿಜಿಸ್ಟರನಲ್ಲಿ ಪ್ರತದ ವಿವರಗಳನ್ನು ನಮೂದಿಸಿ ನಿರ್ವಹಣೆ ಮಾಡಲಾಗುತ್ತಿತ್ತು
  • ಹೊಸ ಕಡತಗಳ ಸೃಷ್ಟಿಸುವುದು, ಕಡತಗಳ ಚಲನವಲನ, ಕಡತಗಳ ಮುಕ್ತಾಯದ ವಿವರಗಳನ್ನು ಪ್ರತ್ಯೇಕವಾಗಿ ರಿಜಿಸ್ಟರನಲ್ಲಿ ನಮೂದಿಸಲಾಗುತ್ತಿತ್ತು
  • ಶಾಲೆಗಳು, ಶಿಕ್ಷಕರು ಮತ್ತು ಮಕ್ಕಳ ಅಂಕಿ ಅಂಶಗಳ ಕ್ರೊಢೀಕರಣ, ಪತ್ರ ಹಾಗೂ ಕಡತಗಳ ತ್ರೈಮಾಸಿಕವಾರು ಮತ್ತು ಮಾಸಿಕವಾರು ವರದಿಗಳನ್ನು ವೈಯಕ್ತಿಕವಾಗಿ ಶ್ರಮವಹಿಸಿ ಮಾಡಲಾಗುತ್ತಿತ್ತು.
  • ಈ ರೀತಿಯಲ್ಲಿ ಅಂಕಿ ಅಂಶಗಳ ಸಂಗ್ರಹಣೆಯ ಕಾರ್ಯನಿರ್ವಹಣೆ ಮಾಡಲು ಸಾಕಷ್ಟು ಸಮಯ ವ್ಯಯವಾದರೂ ವರದಿಗಳಲ್ಲಿನ ಮಾಹಿತಿಯ ನಿಖರತೆಯಲ್ಲಿ ಹಾಗೂ ಪಾರದರ್ಶಕತೆಯಲ್ಲಿ ಕೊರತೆ ಇರುವುದನ್ನು ಗಮನಿಸಲಾಗಿದೆ.
  • ಒಂದೇ ರೀತಿಯ ಮಾಹಿತಿಯನ್ನು, ಅಂಕಿಅಂಶಗಳನ್ನು ಹಲವು ಬಾರಿ ಸಂಗ್ರಹಣೆ ಮಾಡುವುದು

ಇ-ಆಡಳಿತ ಅನುಷ್ಟಾನಗೊಳಿಸುವಲ್ಲಿ ಎದುರಿಸಿದ ಸವಾಲುಗಳು:

  • ಅಗತ್ಯವಾದ ತರಬೇತಿ ಇಲ್ಲದೇ ಇರುವುದರಿಂದ ಗಣಕಯಂತ್ರಗಳನ್ನು ಉಪಯೋಗಿಸಲು ಜ್ಞಾನವಿಲ್ಲದೇ,ಗಣಕಯಂತ್ರ ಕಾರ್ಯನಿವರ್ಹಣೆಯಲ್ಲಿ ಹಿಂಜರಿಕೆ,
  • ಇಲಾಖಾ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಅವಶ್ಯಕವಾಗಿ ಬೇಕಾಗಿರುವ ಗಣಕಯಂತ್ರಗಳು, ತಂತ್ರಾಂಶಗಳು, ತರಬೇತಿಗಳು ಹಾಗೂ ತಾಂತ್ರಿಕ ಜ್ಞಾನದ ಕೊರತೆ

ಇ- ಆಡಳಿತ ಪ್ರಾರಂಭದ ಅಪೇಕ್ಷಿತ ಫಲಗಳು:

  • ಸಾರ್ವಜನಿಕರಿಗೆ/ಸಮುದಾಯಕ್ಕೆ ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ಶೀಘ್ರವಾಗಿ ಒದಗಿಸುವುದು
  • ಇಲಾಖಾ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುವುದು
  • ಇಲಾಖೆಯ ವಿವಿಧ ಹಂತಗಳಲ್ಲಿ ಇ- ಆಡಳಿತ ಚಟುವಟುಕೆಗಳನ್ನು ಅನುಷ್ಟಾನಗೊಳಿಸಲು, ಮಾರ್ಗದರ್ಶನ ಮತ್ತು ನಿರ್ವಹಣೆ ಮಾಡಲು, ತರಬೇತಿ ಪಡೆದ 10 ಜನರ ತಂಡವನ್ನು ರಚಿಸುವುದರ ಮೂಲಕ ರಾಜ್ಯ ಮಟ್ಟದ ಇ-ಆಡಳಿತ ಘಟಕವನ್ನು ಸ್ಥಾಪಸಲಾಯಿತು
  • ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಛೇರಿಗಳಲ್ಲಿ ಇ-ಆಡಳಿತ ಚಟುವಟುಕೆಗಳನ್ನು ಅನುಷ್ಟಾನ ಗೊಳಿಸಲು 6 ಜನ ಸದಸ್ಯರನ್ನು ಹೊಂದಿದ, ಒಟ್ಟು 238 ಇ- ಆಡಳಿತ ಘಟಕಗಳನ್ನು ಪ್ರಾರಂಭಿಸಲಾಯಿತು.
  • ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಕಛೇರಿಗಳಿಗೆ ಹಾರ್ಡವೇರ್ ಹಾಗೂ ಸಾಪ್ಟ್ ವೇರ್ ಹಾಗೂ ಲ್ಯಾಪ್ ಟಾಪ್ ಒದಗಿಸಲಾಯಿತು.
  • ಉಪಗ್ರಹ ಆಧಾರಿತ ಮತ್ತು ಮುಖಾಮುಖಿ ತರಬೇತಿಯ ಮೂಲಕ ಜಿಲ್ಲಾ ಮತ್ತು ಬ್ಲಾಕ್ ಹಂತದ ಕಛೇರಿಗಳ ಇ-ಆಡಳಿತ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
  • ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಕಛೇರಿಗಳಿಗೆ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
  • ಇಲಾಖೆಯ ಎಲ್ಲ ಹಂತದ ಅಧಿಕಾರಿಗಳೂ ಕಛೇರಿ ಕಾರ್ಯನಿರ್ವಹಿಸಲು ಇ-ಮೇಲ್ ಬಳಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಇ ಎಮ್ ಐ ಎಸ್ (ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ):

ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆಯು ಕ್ರಮಬದ್ಧವಾಗಿ, ನೈಜವಾಗಿ ಶಾಲೆಯಲ್ಲಿ ಲಭ್ಯವಿರುವ ಸ್ಔಲಭ್ಯಗಳು, ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಂಕಿಅಂಶಗಳ ಸಂಗ್ರಹ, ಕ್ರೊಢೀಕರಣ ಮತ್ತು ಇಂದೀಕರಿಸುವ ಪ್ರಯತ್ನವಾಗಿದೆ ಇ ಎಮ್ ಐ ಎಸ್ ಮೊದಲು ಡಿಪಿಇಪಿ ಯೋಜನೆಯಿಂದ ಪ್ರಾರಂಭಗೊಂಡು, ನಂತರ ಸರ್ವಶಿಕ್ಷಣ ಅಭಿಯಾನದಿಂದ ಅನುದಾನ ಪಡೆಯುವುದರ ಮೂಲಕ ಮುಂದುವರೆಸಲಾಗಿದೆ ಇ ಎಮ್ ಐ ಎಸ್ ತಂತ್ರಾಂಶದ ಮೂಲಕ, ಅಂಕಿಅಂಶಗಳ ಸಂಗ್ರಹ, ವರದಿ ತಯಾರಿಕೆಯನ್ನು ಹೊಂದಿದ್ದು, ಎಲ್ಲ ಹಂತದ ಆಡಳಿತಾಧಿಕಾರಿಗಳು ಇಲಾಖೆಯ ಕಾರ್ಯಕ್ರಮಗಳಿಗೆ ಯೋಜನೆ ತಯಾರಿಸಲು, ಅನುಷ್ಠಾನಗೊಳಿಸಲು ಹಾಗೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಿದೆ.

ಡೈಸ್ ತಂತ್ರಾಂಶ :

ಡೈಸ್ ತಂತ್ರಾಂಶವನ್ನು ಮಾನವ ಸಂಪನ್ಮೂಲ ಇಲಾಖೆ ನವದೆಹಲಿ ಇವರು ಅಭಿವೃದ್ದಿಪಡಿಸಿರುತ್ತಾರೆ. ಇದು ಇ.ಎಂ.ಐ.ಎಸ್ ತಂತ್ರಾಂಶದ ಪರ್ಯಾಯವಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಇದು ಅನ್ ಲೈನ್ ತಂತ್ರಾಂಶವಾಗಿದ್ದು, ಇಲಾಖೆಯ ಅವಶ್ಯಕತೆಗೆ ಅನುಗುಣವಾಗಿ ತಂತ್ರಾಂಶವನ್ನು ಮಾರ್ಪಾಡು ಮಾಡಲಾಗಿದೆ. ಈ ತಂತ್ರಾಂಶದ ಮೂಲಕ ಸಂಗ್ರಹಿಸಿದ ಶಾಲೆಯಲ್ಲಿ ಲಭ್ಯವಿರುವ ಸ್ಔಲಭ್ಯಗಳು, ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಂಕಿಅಂಶಗಳ ಸಂಗ್ರಹ, ಕ್ರೊಢೀಕರಣ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.
  • ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಕಛೇರಿಯಲ್ಲಿರುವ ಕಡತಗಳು ಹಾಗೂ ಸ್ವೀಕರಿಸುವ ಪತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ.
  • ಇಲಾಖೆಯ ಆಡಳಿತದ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯ ಜೊತೆಗೆ ವೇಗವಾಗಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ, ಇಲಾಖೆಯಲ್ಲಿ ಸಚಿವಾಲಯವಾಹಿನಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿ ಅನುಷ್ಟಾನಗೊಳಿಸಲಾಗಿದೆ.
  • ಕಛೇರಿಯಲ್ಲಿ ದೈನಂದಿನವಾಗಿ ಸ್ವೀಕರಿಸುವ ಪತ್ರಗಳನ್ನು ಸಚಿವಾಲಯವಾಹಿನಿ ತಂತ್ರಾಂಶದ ಮೂಲಕ ನೊಂದಾಣಿ ಮಾಡಿದಾಗ ಪ್ರತಿ ಸ್ವೀಕೃತ ಪತ್ರಗಳಿಗೆ ಒಂದು ಗಣಕಯಂತ್ರ ಸಂಖ್ಯೆಯು ತಂತ್ರಾಂಶದ ಮೂಲಕ ಸೃಜನೆಯಾಗುತ್ತದೆ.
  • ತದನಂತರದ ಪತ್ರದ ಚಲನವಲನಗಳು ಹಾಗೂ ಪತ್ರದ ಮುಂದಿನ ಕ್ರಮಕ್ಕಾಗಿ ಹೊಸದಾಗಿ ಕಡತ ಪ್ರಾರಂಭಿಸಿದಾಗ ಹೊಸದಾಗಿ ಕಡತ ಗಣಕಯಂತ್ರ ಸಂಖ್ಯೆ ಸೃಜನೆಯಾಗುತ್ತದೆ.
  • ಪತ್ರ ಹಾಗೂ ಸಂಬಂದಿಸಿದ ಕಡತದ ಮುಂದಿನ ಚಲನವಲನಗಳು, ಪತ್ರ ಗಣಕಯಂತ್ರ ಸಂಖ್ಯೆ ಹಾಗೂ ಕಡತ ಗಣಕಯಂತ್ರ ಸಂಖ್ಯೆಯನ್ನಾಧರಿಸಿ, ಸಚಿವಾಲಯವಾಹಿನಿ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ, ಅರ್ಜಿದಾರನಿಗೆ, ಇಲಾಖಾ ಸಿಬ್ಬಂದಿಗಳಿಗೆ/ಅದಿಕಾರಿಗಳಿಗೆ ಮಾಹಿತಿಯು ಇಲಾಖಾ ಅಂತರ್ಜಾಲ http://www.schooleducation.kar.nic.in/ ನಲ್ಲಿನ sachivalayavahini-Letters & File Movement search ನಲ್ಲಿ ಸಂಖ್ಯೆ/ ವಿಷಯ /ಪತ್ರ ಸಂಖ್ಯೆ/ ಕಡತ ಸಂಖ್ಯೆಯನ್ನು ಯಾವುದಾದರೂ ಒಂದನ್ನು ನಮೂದಿಸಿ, ಪತ್ರ ಹಾಗೂ ಕಡತಗಳ ಚಲನವಲನಗಳ ಮಾಹಿತಿಯನ್ನು ದೊರೆಯುತ್ತದೆ.
  • ಶಿಕ್ಷಣವಾಹಿನಿ ಎಂಬ ಹೆಸರಿನ ಮೂಲಕ ಈ ಯೋಜನೆಯನ್ನು , 2006-2007 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಹಾಗೂ ಸರ್ವಶಿಕ್ಷಣ ಅಭಿಯಾನ ಕಛೇರಿಯಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಈ ತಂತ್ರಾಂಶವನ್ನು ಇಲಾಖೆಯ ಎಲ್ಲಾ ಹಂತದ ಕಛೇರಿಗಳಿಗೆ, 02 ಅಪರ ಆಯುಕ್ತಾಲಯಗಳು, 02 ಸಹನಿರ್ದೇಶಕರ ಕಛೇರಿಗಳು, 34 ಉಪನಿರ್ದೇಶಕರ ಕಛೇರಿಗಳು ಹಾಗೂ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೂ ವಿಸ್ತರಿಸಲಾಗಿದೆ.

    ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ[ಸಿ.ಸಿ.ಎಂ.ಎಸ್] ಬಳಕೆದಾರರ ಕೈಪಿಡಿ.

    ಸಚಿವಾಲಯವಾಹಿನಿ ಬಳಕೆದಾರರ ಕೈಪಿಡಿ ಆಂಗ್ಲ ಭಾಷೆ.

    ಶಿಕ್ಷಣವಾಹಿನಿ ತಂತ್ರಾಂಶ-ವರ್ಷನ್-2 ಕನ್ನಡ ಬಳಕೆದಾರರ ಕೈಪಿಡಿ.

ಸರ್ಕಾರಿ ನೌಕರರ ವೇತನ ತಂತ್ರಾಂಶ- (ಹೆಚ್.ಆರ್.ಎಂ.ಎಸ್. ತಂತ್ರಾಂಶ) ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) 2008 ರಲ್ಲಿ ಪ್ರಾರಂಭಿಸಲಾಯಿತು. ಸಚಿವಾಲಯದ ಇ- ಆಡಳತ ಕೇಂದ್ರವು ಹೆಚ್ ಆರ್ ಎಮ್ ಎಸ್ ತಂತ್ರಾಂಶ ಸೇವೆ ಒದಗಿಸುವ ಕೇಂದ್ರವಾಗಿದೆ. ಈ ಕೇಂದ್ರವು ಯಾವುದೇ ಡಿಡಿಓ ಅಥವಾ ನೌಕರರೊಂದಿಗೆ ನೇರ ಪತ್ರ ವ್ಯವಹಾರ ನಡೆಸುವುದಿಲ್ಲ. ಆಯಾ ಇಲಾಖೆಯ ಹೆಚ್ ಆರ್ ಎಮ್ ಎಸ್ ಘಟಕದ ಮುಖ್ಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಯು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರ ವಿವರಗಳನ್ನು ವಿದ್ಯುನ್ಮಾನ ತಂತ್ರಾಂಶ ಸಾಧನ ವ್ಯವಸ್ಥೆಯ ಮೂಲಕ ನಿರ್ವಹಿಸುತ್ತದೆ.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯು ನಿರ್ವಹಿಸುವ ಪ್ರಮುಖ ಮಾಡ್ಯೂಲ್ ಗಳು:

ಸೇವಾ ದಾಖಲೆಗಳು ವೇತನ ಬಿಲ್ಲುಗಳ ತಯಾರಿಕೆ ವರ್ಗಾವಣೆ ಬಡ್ತಿ ಶಿಸ್ತಿನ ಕ್ರಮಗಳು ದೂರು ನಿರ್ವಹಣಾ ವ್ಯವಸ್ಥೆ ಇತರೆ ವರದಿಗಳು ಆನ್ ಲೈನ್ ಸಹಾಯ

ಇ – ಆಡಳಿತ ಘಟಕದಿಂದ ಶಿಕ್ಷಣ ಇಲಾಖೆಗೆ ಅವಶ್ಯಕವಾಗಿ ಬೇಕಾಗುವ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಇಲಾಖಾ ವೆಬ್ ಸೈಟ್ ನ್ನು ಎನ್ ಐ ಸಿ ಯವರ ಸಹಯೋಗದೊಂದಿಗೆ http://www.schooleducation.kar.nic.in ಅಭಿವೃದ್ಧಿ ಪಡಿಸಲಾಗಿದೆ

ಶಿಕ್ಷಣವಾಹಿನಿ ತಂತ್ರಾಂಶ ನ್ಯಾಯಾಲಯ ಪ್ರಕರಣಗಳ ನಿರ್ವಹಣಾ ವ್ಯವಸ್ಥೆ ಮಧ್ಯಾಹ್ನ ಉಪಹಾರ ಯೋಜನಾ ನಿರ್ವಹಣಾ ವ್ಯವಸ್ಥೆ ತರಗತಿ ಪ್ರಕ್ರಿಯೆ ಮೌಲ್ಯಮಾಪನ ತಂತ್ರಾಂಶ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿ ಕ್ಷೇಮಾಭುವೃದ್ಧಿ ನಿಧಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ತಂತ್ರಾಂಶ ಪಠ್ಯ ಪುಸ್ತಕ ನಿರ್ವಹಣಾ ವ್ಯವಸ್ಥೆ (ವಿದ್ಯಾವಾಹಿನಿ ) ಶಿಕ್ಷಕರ ತರಬೇತಿ ತಂತ್ರಾಂಶ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು ಪ್ರಶ್ನೆಗಳಿಗೆ ಉತ್ತರ ತಂತ್ರಾಂಶ
ಕ್ರಮ ಸಂಖ್ಯೆ ವಿಷಯ
59
Dated 27-11-2020 ಎನ್.ಪಿ.ಎಸ್ ಬ್ಯಾಕ್ ಲಾಗ್ ಪ್ರಕರಣಗಳ ಷೆಡ್ಯೂಲ್ IV ಮತ್ತು Vಗಳನ್ನು Submit ಮಾಡುವ ಕುರಿತು Circular | Districtwise Pending cases | Complete details of pending details.
58
ಸಿಬ್ಬಂದಿ ಸೇವಾ ಮಾಹಿತಿ ಮತ್ತು SPARROW ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ದಿನಾಂಕ:28-12-2018.
57
2018ನೇ ವೇತನ ಪರಿಷ್ಕರಣೆ- ಪರಿಷ್ಕೃತ ವೇತನ ಶ್ರೇಣಿಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:22-06-2018.
56
ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಬಾಕಿ ಇರುವ ಸೌಲಭ್ಯಗಳನ್ನು ನೀಡುವ ಹಾಗೂ ತಪ್ಪಾದ ಮಾಹಿತಿ ತಿದ್ದುಪಡಿ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:03-05-2018.
55
ನೌಕರರ ಅಮಾನತ್ತಿನ ಪ್ರಕರಣಗಳನ್ನು ನಿಯಮಿತವಾಗಿ ಕನಿಷ್ಟ 3 ತಿಂಗಳಿಗೊಮ್ಮೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:03-04-2018.
54
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಎಲ್ಲಾ ಡಿ.ಡಿ.ಓ.ಗಳು ತಪ್ಪಾದ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:06-02-2018.
53
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನೌಕರರ ಪ್ರಥಮ ಕೆಜಿಐಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:27-01-2018.
52
ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ನೌಕರರ ಕೆಜಿಐಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:05-12-2017.
51
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ Online request ನೀಡುವಾಗ ಹಾಗೂ ಶಾಖೆಗೆ ಪತ್ರಗಳನ್ನು ಕಳುಹಿಸುವಾಗ ಲಗತ್ತಿಸಬೇಕಾದ ಅಡಕಗಳ ಬಗ್ಗೆ ಸುತ್ತೋಲೆ ದಿನಾಂಕ:29-11-2017.
50
Paybill and Arrears bill ಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಬಿಲ್ಲನ್ನು ಪರಿಶೀಲಿಸದೆ ಅಪ್ರೂವ್ ಮಾಡಿಕೊಂಡು ರಿವರ್ಟ್ ಆನ್ ಲೈನ್ ರಿಕ್ವೆಸ್ಟ್ ನೀಡುತ್ತಿರುವ ಬಗ್ಗೆ ನೆನಪೋಲೆ ದಿನಾಂಕ:13-11-2017.
49
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾಗಿ ಜನರೇಟ್ ಆಗಿರುವ ಬಿಲ್ಲನ್ನು ಪರಿಶೀಲಿಸದೇ ರಿವರ್ಟ್ ಮಾಡಲು ನೀಡುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:03-10-2017.
48
ಇಲಾಖಾ ವೆಬ್ ಸೈಟ್ ನಲ್ಲಿ ರುವ ಮಾಹಿತಿಗಳನ್ನು ಆಗಿಂದಾಗ್ಗೆ ಅಪ್ ಡೇಟ್ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ: 24-01-2017.
47
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಇಲ್ಲಿನ ಕಂಪ್ಯೂಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ವಾರ್ಷಿಕ ನಿರ್ವಹಣೆ ನೀಡುವ ಬಗ್ಗೆ ಜ್ಞಾಪನ ದಿನಾಂಕ:14-07-2016.
46
ಇಲಾಖಾ ವೆಬ್ ಸೈಟ್ ಹಾಗೂ ತಂತ್ರಾಂಶಗಳನ್ನು ತಾಂತ್ರಿಕ ಆಡಿಟ್ ಮಾಡಿಸುವ ವಿಚಾರವಾಗಿ ಸುತ್ತೋಲೆ ದಿನಾಂಕ:22-06-2016.
45
ನ್ಯಾಯಾಲಯ ಪ್ರಕರಣಗಳನ್ನು ಸಿ.ಸಿಎಂ.ಎಸ್.(ಸಚಿವಾಲಯವಾಹಿನಿ) ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ.
44
ಸಿಬ್ಬಂದಿಯ ವರ್ಗಾವಣೆ, ಬಡ್ತಿ, ಅಂತರಿಕ ವರ್ಗಾವಣೆ ಸಂದರ್ಭದಲ್ಲಿ ಕಡತ ಪಟ್ಟಿಯನ್ನು ಸಚಿವಾಲಯ ವಾಹಿನಿಯ ಮೂಲಕ ಪಡೆದು ಕಡತಗಳನ್ನು ಹಸ್ತಾಂತರಿಸುವ ಬಗ್ಗೆ ಸುತ್ತೋಲೆ.
43
ಗೆಜೆಟೆಡ್ ಅಧಿಕಾರಿಗಳ ರಜೆ ನಿರ್ವಹಣೆ ಮತ್ತು 2015ರ ಕ್ಯಾಲೆಂಡರ್ ವರ್ಷದ ಗಳಿಕೆ ರಜೆ ನಗದೀಕರಣ ಕುರಿತ ಸುತ್ತೋಲೆ ದಿನಾಂಕ:10-12-2015.
42
ಇಲಾಖೆಗೆ ಸಂಭಂಧಿಸಿದ ಮಾಹಿತಿಗಳು ಹಾಗೂ ಸುತ್ತೋಲೆಗಳನ್ನು ಇಲಾಖಾ ವೆಬ್ ಸೈಟ್ ನಲ್ಲಿ ಅಳವಡಿಸಿರುವ ಬಗ್ಗೆ ಸುತ್ತೋಲೆ.
41
ಬೆಂಗಳೂರು ಮತ್ತು ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಮೈಕ್ರೋಸಾಪ್ಟ್ ಸಂಸ್ಥೆಯ ವತಿಯಿಂದ ಗಣಕ ತರಬೇತಿ ಕಾರ್ಯಕ್ರಮ.
40
ಡಿಜಿಎಸ್&ಡಿ ದರಪಟ್ಟಿಯನ್ವಯ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಕಛೇರಿಗಳಿಗೆ ಒಂದು ಆಲ್ ಇನ್ ಒನ್ ಕಂಪ್ಯೂಟರ್ ಅನ್ನು ಖರೀದಿಸುವ ಕುರಿತ ಸುತ್ತೋಲೆ ದಿನಾಂಕ:11-11-2015.
39
ಇಲಾಖೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಸಿಬ್ಬಂದಿ ವರ್ಗದವರ ಸೇವಾ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ ದಿನಾಂಕ:28-09-2015.
38
ಮೈಕ್ರೋಸಾಫ್ಟ್ ವತಿಯಿಂದ ಆಯೋಜಿಸಿರುವ 2 ದಿನಗಳ ಗಣಕ ತರಬೇತಿ ಅಧಿಕಾರಿಗಳನ್ನು/ಸಿಬ್ಬಂದಿ ವರ್ಗದವರನ್ನು ನಿಯೋಜಿಸುವ ಬಗ್ಗೆ ಸುತ್ತೋಲೆ ದಿನಾಂಕ:29-10-2015.
37
ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿರುವ ಕಾಗದರಹಿತ ಪ್ರಮಾಣ ಪತ್ರಗಳ ಸೇವೆಯನ್ನು ಬಳಸುವ ಬಗ್ಗೆ ಸುತ್ತೋಲೆ ದಿನಾಂಕ:20-09-2015.
36
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಸೇವಾ ಮಾಹಿತಿಗಳನ್ನು ಅಳವಡಿಸುವ ಬಗ್ಗೆ ವೇತನ ಬಟವಾಡೆ ಅಧಿಕಾರಿಗಳಿಗೆ ನೀಡಲಾದ ಸೂಚನೆ ಕುರಿತ ಸುತ್ತೋಲೆ ದಿನಾಂಕ:18-08-2015.
35
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ನೌಕರರ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸುವ ಬಗ್ಗೆ ದಿನಾಂಕ:29-07-2015.
34
ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿರುವ ಕಾಗದರಹಿತ ಪ್ರಮಾಣ ಪತ್ರಗಳ ಸೇವೆಯನ್ನು ಬಳಸುವ ಬಗ್ಗೆ ಸುತ್ತೋಲೆ ದಿನಾಂಕ:16-05-2015.
33

ದಿನಾಂಕ:31-01-2015ರವರೆಗೆ ಕಂಪ್ಯೂಟರ್, ಯುಪಿಎಸ್ ಪ್ರಿಂಟರ್ ಮತ್ತು ಇತರ ಪರಿಕರಗಳನ್ನು ಖರೀದಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ವಿವರಗಳ ಸರ್ಕಾರಿ ಆದೇಶ.

32
ಕನ್ನಡ ಸಂಸ್ಕೃತಿ ಇಲಾಖೆಯು ಅಭಿವೃದ್ಧಿಪಡಿಸಿರುವ ಕನ್ನಡ ಯುನಿಕೋಡ್ ತಂತ್ರಾಂಶವನ್ನು ಉಪಯೋಗಿಸುವ ಬಗ್ಗೆ.
31

ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಡಯಟ್ ಹಾಗೂ ಸಿ.ಟಿ.ಇ. ಕಛೇರಿಗಳೀಗೆ ಕೆ.ಸ್ವಾನ್ ಸಂಪರ್ಕವ್ಯವಸ್ಥೆ ಕಲ್ಪಿಸುವ ಬಗ್ಗೆ ಸುತ್ತೋಲೆ.

30
ಶಿಕ್ಷಣವಾಹಿನಿ ತಂತ್ರಾಂಶವನ್ನು ಸಚಿವಾಲಯ ವಾಹಿನಿಯಲ್ಲಿ ವಿಲೀನಗೊಳಿಸುವ ಬಗ್ಗೆ ಹಾಗೂ ಬಳಕೆದಾರರಿಗೆ ವಿಶೇಷ ಸೂಚನೆಗಳು.
29
ಶಿಕ್ಷಣವಾಹಿನಿ ತಂತ್ರಾಂಶವನ್ನು ಸಚಿವಾಲಯ ವಾಹಿನಿ ತಂತ್ರಾಂಶದಲ್ಲಿ ವಿಲೀನಗೊಳಿಸುವ ಬಗ್ಗೆ.(31-07-2014).
28
ಡಯಟ್ ಮತ್ತು ಸಿ ಟಿ ಇ ಗಳಲ್ಲಿ ಸಕಾಲ ಸೇವೆಗಳನ್ನು ಶಿಕ್ಷಣವಾಹಿನಿ ತಂತ್ರಾಂಶವನ್ನು ಬಳಸಿಕೊಂಡು ನೀಡಲು ತರಬೇತಿ ನೀಡುವ ಬಗ್ಗೆ ದಿನಾಂಕ:25-07-2014.
27
ಶಿಕ್ಷಣವಾಹಿನಿ ತಂತ್ರಾಂಶವನ್ನು ಸಚಿವಾಲಯವಾಹಿನದೊಂದಿಗೆ ವೀಲಿನಗೊಳಿಸುವ ಬಗ್ಗೆ ಎನ್.ಐ.ಸಿ ಯವರೊಂದಿಗೆ ಸಭಾ ನಡಾವಳಿ - ದಿನಾಂಕ 11-04-2014.
26
Windows XP & MS Office 2003 ಸಪೋರ್ಟ ಕಛೇರಿಗಳಲ್ಲಿ ಹಾಲಿ ಉಪಯೋಗಿಸುತ್ತಿರುವ ಗಣಕಯಂತ್ರಗಳಲ್ಲಿನ ತಂತ್ರಾಂಶಗಳ ಸೇವೆಗಳು ಅಂತ್ಯಗೊಳ್ಳುವ ಕುರಿತು ಸುತ್ತೋಲೆ ದಿನಾಂಕ: 01-04-2014.
25
ಬಿ ಇ ಒ ಸಿಬ್ಬಂದಿಗೆ ಶಿಕ್ಷಣ ವಾಹಿನಿ ತರಬೇತಿ , ವೇಳಾಪಟ್ಟಿ, ಉಪಯೋಗಿತಾ ಪ್ರಮಾಣ ಪತ್ರ ಕುರಿತು- ಸುತ್ತೋಲೆ. ದಿನಾಂಕ: 24-02-2014 .
24
ಡಯಟ್ ಉಪನ್ಯಾಸಕರಿಗೆ ಮಾಸ್ಟರ್ ಶಿಕ್ಷಣವಾಹಿನಿ ತರಬೇತಿಯ ಪರಿಷ್ಕ್ರತ ವೇಳಾಪಟ್ಟಿ ಕುರಿತು ಜ್ಞಾಪನ ದಿನಾಂಕ: 20-02-2014.
23
ಡಯಟ್ ಉಪನ್ಯಾಸಕರಿಗೆ ಮಾಸ್ಟರ್ ಶಿಕ್ಷಣವಾಹಿನಿ ತರಬೇತಿ ಮುಂದೂಡಿರುವ ಪತ್ರ.
22
ಆಯುಕ್ತರ ಕಛೇರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಇ- ಆಡಳಿತ ಘಟಕ ಬಲವರ್ಧನೆ ಬಗ್ಗೆ – ಸರ್ಕಾರದ ಆದೇಶ ದಿನಾಂಕ: 18-02-2014.
21
ಡಯಟ್ ಉಪನ್ಯಾಸಕರಿಗೆ ಶಿಕ್ಷಣ ವಾಹಿನಿ ತಂತ್ರಾಂಶ ಕುರಿತ ತರಬೇತಿಯ ಜ್ಞಾಪನ ದಿನಾಂಕ: 10-12-2014.
20
2013-14 ರಲ್ಲಿ ಬಿ ಇ ಒ ಕಛೇರಿ ಸಿಬ್ಬಂದಿಗೆ ಡಯಟ್ ನಲ್ಲಿ ಶಿಕ್ಷಣವಾಹಿನಿ ತರಬೇತಿಗಾಗಿ ಹಣ ಬಿಡುಗಡೆ ಬಗ್ಗೆ – ಜ್ಞಾಪನ ದಿನಾಂಕ: 10-12-2014.
19
ಜ್ಯೋತಿ ಸಂಜೀವಿನಿ ವೈದ್ಯಕೀಯ ಚಿಕಿತ್ಸೆ ಕಾರ್ಯಕ್ರಮದಡಿಯಲ್ಲಿ ನೌಕರರ ಕುಟುಂಬ ಮಾಹಿತಿಯನ್ನು ಹೆಚ್.ಆರ್ ಎಮ್ ಎಸ್ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ - ಡಿ ಪಿ ಎ ಆರ್ ಸುತ್ತೋಲೆ ದಿನಾಂಕ: 04-01-2014.
18
ಬಿ ಆರ್ ಸಿ ಕೇಂದ್ರಗಳಲ್ಲಿ ನಡೆಯುವ ಹೆಚ್ ಆರ್ ಎಮ್ ಎಸ್ ತರಬೇತಿ ಮುಂದೂಡಿರುವ ಸುತ್ತೋಲೆ – ಪರಿಷ್ಕ್ರತ ದಿನಾಂಕ – 22-11-2013.
17
ಕಂಪ್ಯೂಟರ್, ಯುಪಿಎಸ್ ಪ್ರಿಂಟರ್ ಮತ್ತು ಇತರ ಪರಿಕರಗಳನ್ನು ಖರೀದಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ವಿವರಗಳು-21-01-2013.
16
ಮೆ: ಕಿಯೋನಿಕ್ಸ್ ಸಂಸ್ಥೆಯ ಮೂಲಕ ಬ್ಲಾಕ್ ಕಛೇರಿಗಳ ಸಿಬ್ಬಂದಿಗಳಿಗೆ ಶಿಕ್ಷಣ ವಾಹಿನಿ ತರಬೇತಿಯನ್ನು ನೀಡುವ ಬಗ್ಗೆ - ಸುತ್ತೋಲೆ ದಿನಾಂಕ 19-11-2012.
15
ಜಿಲ್ಲೆ ಮತ್ತು ಬ್ಲಾಕ್ ಗಳಲ್ಲಿ ಇ- ಜನಸ್ಪಂದನ / ಸಕಾಲ ಕಾರ್ಯಕ್ರಮ ಅನುಷ್ಠಾನ ಕುರಿತು ಸುತ್ತೋಲೆ ದಿನಾಂಕ: 1-10-2012.
14
ಇ-ಜನಸ್ಪಂದನ /ಸಕಾಲ ನೋಡಲ್ ಅಧಿಕಾರಿಗಳ ಸಭಾ ಸಭಾ ನಡವಳಿಗಳು ದಿನಾಂಕ 28-09-2012.
13
ಎಲ್ ಪಿ ಒ ( ಶಿಕ್ಷಣ ವಾಹಿನಿ ) ತಂತ್ರಾಂಶವನ್ನು ರಾಜ್ಯ ದತ್ತಾಂಶ ಕೇಂದ್ರದಲ್ಲಿ ಅಳವಡಿಸಿರುವ ಬಗ್ಗೆ.
12
ಸಾರ್ವಜನಿಕ ಶಿಕ್ಷಣ ಇಲಾಖೆಯ ಇ-ಆಡಳಿತ ಘಟಕ ಬಲವರ್ಧನೆಗೆ ಆದೇಶ ದಿನಾಂಕ : 20-04-2011.
11
2010-2011 ನೇ ಸಾಲಿನ ಆರ್.ಎಮ್.ಎಸ್.ಎ. ಡಿಸಿಎಫ್ ನಮೂನೆ | ಸೆಮಿಸ್ ಡಿಸಿಎಫ್ ನಮೂನೆಗಳು .
10
ಡೈಸ್ ಡಿ ಸಿ ಎಫ್ ನಮೂನೆ 2010-11 ಇಂಗ್ಲೀಷ್ ನಮೂನೆ | ಕನ್ನಡ ನಮೂನೆ | ಡೈಸ್ ಸುತ್ತೋಲೆ.
09
ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಜಿಲ್ಲಾ ಉಪನಿರ್ದೇಶಕರ ಕಛೇರಿಯಲ್ಲಿರುವ ಕಡತಗಳನ್ನು ಗಣಕೀಕರಿಸುವ ಬಗ್ಗೆ.
08
ಡೈಸ್ ಕೋಡ್ ನೀಡದಿರುವ ಶಾಲೆಗಳಿಗೆ ಡೈಸ್ ಕೋಡ್ ನೀಡುವ ಕುರಿತು - ಸುತ್ತೋಲೆ.
07
ಅನುದಾನಿತ ಶಾಲೆಗಳ ಸಿಬ್ಬಂದಿಗಳ ಸೇವಾಪುಸ್ತಕದಲ್ಲಿನ ಮಾಹಿತಿಯನ್ನು ಹೆಚ್ ಆರ್ ಎಮ್ ಎಸ್ ನಲ್ಲಿ ದಾಖಲಿಸುವುದು - ಕಿಯೋನಿಕ್ಸ್ ಪತ್ರ | ಅನುಷ್ಠಾನ ಯೋಜನೆ & ಸ್ಥಳ) - ಬೆಂಗಳೂರು ಕೇಂದ್ರ | ಹುಬ್ಬಳ್ಳಿ ಕೇಂದ್ರ
06
ಶಿಕ್ಷಣ ವಾಹಿನಿ ( ಪತ್ರ ಮತ್ತು ಕಡತ ನಿರ್ವಹಣೆ ) ಬಳಕೆದಾರರ ಕೈಪಿಡಿ.
05
ಹೆಚ್ ಆರ್ ಎಮ್ ಎಸ್ ಡೇಟಾ ಇಂದೀಕರಿಸಲು ಡಿಡಿಒ ಗಳು ನೆಮ್ಮದಿ ಕೇಂದ್ರ ಬಳಸುವ ಕುರಿತು.
04
ರಾಜ್ಯದ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಹೆಚ್ ಆರ್ ಎಮ್ ಎಸ್ ಅನುಷ್ಠಾನ ಕುರಿತು ಹಣ ಬಿಡುಗಡೆ ಸುತ್ತೋಲೆ ದಿನಾಂಕ : 28-08-2007
03
ಇ ಎಮ್ ಐ ಎಸ್ 2007-2008(ತ್ರೈಮಾಸಿಕ ನಮೂನೆ ಬಿಇಒ ಕಛೇರಿಗಳಿಗೆ)
02
ಹೆಚ್ ಆರ್ ಎಮ್ ಎಸ್ ಅನುಷ್ಠಾನ ಕುರಿತು ಬಿಇಒ ಕಛೇರಿಯ ಬಿಲ್ ಕ್ಲರ್ಕ್ / ಡೇಟಾ ಎಂಟ್ರಿ ಆಪರೇಟರ್ ಗಳಿಗೆ ತರಬೇತಿ - ಸುತ್ತೋಲೆ.
01

ಶಿಕ್ಷಕರ ವರ್ಗಾವಣಾ ತಂತ್ರಾಂಶ 2007-08 - ತಂತ್ರಾಂಶದಲ್ಲಿ ಪರಿಷ್ಕರಣೆ ದಿನಾಂಕ:15-05-2007.

  • Copyright Policy
  • Waiver of Right
  • Help
  • Hyperlink Policy
  • Privacy Policy
  • Availability of Screen Reader
  • Terms and Conditions
  • Home
  • Primary
  • Secondary
  • Minority
  • Mid Day Meals
  • S.W.F & T.B.F
  • C A Cell
  • SISLEP