ಪ್ರತಿಭಾ ಕಾರಂಜಿ ಕಾರ್ಯಕ್ರಮ :

ಇದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಇಲಾಖೆಯ ಯೋಜನಾ ಕಾರ್ಯಕ್ರಮದಡಿಯಲ್ಲಿ ರೂಪಿಸಿದ ವಿಸ್ತೃತ ಕಾರ್ಯಕ್ರಮವಾಗಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿನೂತನವಾಗಿದ್ದು, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಕ್ಲಸ್ಟರ್, ಬ್ಲಾಕ್, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳನ್ನು ರೂಪಿಸಲಾಗಿದೆ. ಇದು ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಲು ಸಾಮಾನ್ಯ ವೇದಿಕೆಯಾಗಿದ್ದು, ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಮೆಚ್ಚುಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ನೀಡಲಾಗುತ್ತದೆ

  • ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯವಾಗುತ್ತದೆ.
  • ಇದು ಶಿಕ್ಷಣ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜಿಸುತ್ತದೆ.
  • ಮಕ್ಕಳಲ್ಲಿನ ಗುಪ್ತ ಪ್ರತಿಭೆಯನ್ನು ಹೊರತರುತ್ತದೆ.
  • ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ.
  • ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ.
  • ವಿದ್ಯಾರ್ಧಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಪೋಷಕರು ಹಾಗೂ ಶಿಕ್ಷಕರನ್ನು ಪ್ರೋತ್ಸಾಹಿಸುತ್ತದೆ.
  • ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ.

ಶಾಲೆಯಿಂದ ರಾಜ್ಯ ಮಟ್ಟದವರೆಗೆ ವಿಧ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ತರಗತಿ 1 ರಿಂದ 4 ಹಾಗೂ 5 ರಿಂದ 7 ರವರೆಗಿನ ವಿಧ್ಯಾರ್ಥಿಗಳಿಗೆ ವೈಯಕ್ತಿಕ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಂಠಪಾಠ ಸ್ಪರ್ಧೆ, ಧಾರ್ಮಿಕ ಶ್ಲೋಕ(ಸಂಸ್ಕೃತ ಮತ್ತು ಅರೇಬಿಕ್), ಸುಗಮ ಸಂಗೀತ, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವುದು, ಮಣ್ಣಿನ ಆಕೃತಿ ಮಾಡುವುದು, ಯೋಗಾಸನ (5 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ). ತಂಡಗಳ ಸ್ಪರ್ಧೆಗಳಿಗಾಗಿ ಜಾನಪದ ನೃತ್ಯ, ದೇಶಭಕ್ತಿ ಗೀತೆಗಳು, ಕೋಲಾಟ, ರಸಪ್ರಶ್ನೆ( ಪ್ರತೀ ಶಾಲೆಯಿಂದ 02 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು).
8 ರಿಂದ 10 ತರಗತಿಯ ವಿದ್ಯಾರ್ಥಿಯ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಷಣ, ಕಂಠಪಾಠ, ಧಾರ್ಮಿಕ ಶ್ಲೋಕ(ಸಂಸ್ಕೃತ ಮತ್ತು ಅರೇಬಿಕ್) ಯೋಗಾಸನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಹಾಡು, ಸುಗಮ ಸಂಗೀತ, ಭರತನಾಟ್ಯ, ಮಣ್ಣಿನ ಆಕೃತಿ ಮಾಡುವುದು, ಅಣಕು ನಟನೆ, ಪ್ರಬಂಧ ಬರೆಯುವುದು, ಚರ್ಚಾ ಸ್ಪರ್ಧೆ, ರಂಗೋಲಿ, ಗಜಲ್, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವ ಚಟುವಟಿಕೆಗಳು ಇರುತ್ತದೆ.ತಂಡಗಳ ಸ್ಪರ್ಧೆಗಳಲ್ಲಿ ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ (ಪ್ರತೀ ಶಾಲೆಯಿಂದ 02 ವಿಧ್ಯಾರ್ಥಿಗಳು) ನಾಟಕ, ಕವಾಲಿ ಮತ್ತು ವಿಜ್ಞಾನ ಮಾದರಿ ತಯಾರಿಕೆಯ ಕಾರ್ಯಚಟುವಟಿಕೆಗಳು ಇರುತ್ತದೆ.

2015-16ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ.