ಶಿಕ್ಷಣ ನೀತಿ :
ಸಾಮಾನ್ಯ ಉದ್ಧೇಶಗಳು :
ರಾಜ್ಯದಲ್ಲಿ ಜಾತ್ಯಾತೀತ ಶಿಕ್ಷಣವನ್ನು ಸುಧಾರಿಸುವ ಮತ್ತು ಮುಂದುವರೆಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಪ್ರತೀ ವರ್ಷ ಅನುದಾನವನ್ನು ಹಂಚಿಕೆ ಮಾಡಿ, ಪ್ರಾಥಮಿಕ ಶಾಲಾ ಖಾಸಗಿ ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಿಗೆ ಅನುದಾನ ಸಂಹಿತೆ ನಿಯಮಾನುಸಾರ ಅನುದಾನವನ್ನು ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿದೆ.
ಉದ್ಧೇಶ :
- ಅನುದಾನವನ್ನು ಈ ಕೆಳಗೆ ನಮೂದಿಸಿದ ಉದ್ದೇಶಗಳಿಗೆ ನೀಡಲಾಗುತ್ತದೆ :-
(ಅ) ವಿದ್ಯಾಸಂಸ್ಥೆಗಳ ನಿರ್ವಹಣೆ ;
(ಆ) ಶಾಲಾ ಕಟ್ಟಡಗಳ ಖರೀದಿ, ಅಭಿವೃದ್ಧಿ, ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ;
(ಇ) ಆಟದ ಮೈದಾನದ ಅಭಿವೃದ್ಧಿ ಹಾಗೂ ಶಾಶ್ವತ ಸೌಲಭ್ಕಕ್ಕಾಗಿ ;
(ಈ) ಶಾಲಾ ಸಲಕರಣೆಗಾಗಿ ,.
ಅನುದಾನ ಬಿಡುಗಡೆಗೆ ಸರ್ಕಾರದ ವಿವೇಚನೆ ಬಗ್ಗೆ :
ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸರ್ಕಾರವು ಬಿಡುಗಡೆ ಮಾಡುವ ಅನುದಾನದ ಮೇಲೆ ಸರ್ಕಾರದ ವಿವೇಚನೆಗೆ ಒಳಪಟ್ಟಿದ್ದು, ಅನುದಾನವನ್ನು ಮೂಲಭೂತ ಹಕ್ಕೆಂದು ಪರಿಗಣಿಸುವಂತಿಲ್ಲ. ಸರ್ಕಾರವು ಯಾವುದೇ ಕಾರಣವನ್ನು ನೀಡದೇ, ಪ್ರಾಥಮಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಅನುದಾನವನ್ನು ಹಿಂಪಡೆಯುವ, ಕಡಿಮೆ ಮಾಡುವ, ಮಾರ್ಪಾಡು ಮಾಡುವ ಹಾಗೂ ಪರಿಷ್ಕರಿಸುವ ಹಕ್ಕುನ್ನು ಹೊಂದಿರುತ್ತದೆ.
ಮಂಜೂರಾತಿ ಪ್ರಾಧಿಕಾರ :
ರಾಜ್ಯ ಸರ್ಕಾರವು ಅನುದಾನವನ್ನು ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಶಿಫಾರಸ್ಸು ಅಥವಾ ನಿರ್ದೇಶಕರು ಪ್ರಾಥಮಿಕ ಶಿಕ್ಷಣ ಅವರ ಸ್ವಂತ ಶಿಫಾರಸ್ಸು ಅಥವಾ ನಿರ್ದೇಶಕರು ಅಧಿಕಾರ ವಿನಿಯೋಗೊಂಡ ಅಧೀನ ಕಛೇರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಮಂಜೂರು ಮಾಡಲಾಗುವುದು.
ನಿಯಮಗಳ ವ್ಯಾಖ್ಯಾನ :
ಖಾಸಗಿ ಶಾಲೆಗಳ ಅನುದಾನ ಸಂಹಿತೆಯ ಯಾವುದೇ ನಿಯಮಗಳನ್ನು ಮಾರ್ಪಾಡು ಮಾಡುವ ಅಧಿಕಾರವು ಸರ್ಕಾರಕ್ಕಿದ್ದು, ಸರ್ಕಾರದ ನಿರ್ಧಾರವು ಅಂತಿಮವಾಗಿರುತ್ತದೆ.