ಪ್ರಾಥಮಿಕ ಶಿಕ್ಷಣದ ಧ್ಯೇಯ ಮತ್ತು ಉದ್ದೇಶಗಳು:

ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಲು ಕರ್ನಾಟಕ ಸರ್ಕಾರವು ಕೆಳಕಂಡ ಧ್ಯೇಯೋದ್ಧೇಶಗಳನ್ನು ಹೊಂದಿದೆ:

  • 06 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು 1 ರಿಂದ 8ನೇ ತರಗತಿಯಲ್ಲಿರುವುದನ್ನು ಖಾತ್ರಿ ಪಡಿಸುವುದು.
  • 08 ವರ್ಷಗಳ ಉಚಿತ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸುವುದು.
  • ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧಿಸಲು ಶಿಕ್ಷಣವನ್ನು ಸಾಧನವನ್ನಾಗಿ ರೂಪಿಸುವುದು.
  • ಕಲಿಕಾ ಪ್ರಕ್ರಿಯೆಯನ್ನು ಸ್ಥಳೀಯವಾಗಿ ಶಿಶುಕೇಂದ್ರಿತ ಚಟುವಟಿಕಾಧಾರಿತ ಹಾಗೂ ಸಂತಸದಾಯಕವಾಗಿರುವಂತೆ ಮಾಡುವುದು.
  • ಶೈಕ್ಷಣಿಕ ಆಡಳಿತವನ್ನು ವಿಕೇಂದ್ರೀಕರಿಸಿ, ಸಮುದಾಯದ ಒಡೆತನದೊಂದಿಗೆ ಮಕ್ಕಳ ಶಿಕ್ಷಣ ಹಕ್ಕನ್ನು ಪೂರೈಸುವುದು.