ಅಡುಗೆ ಕೋಣೆಗಳ ವಿವರ :
*1293 ಅಡುಗೆ ಕೋಣೆಗಳನ್ನು ಹಳೆಯ ದರದಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲದ ಕಾರಣ ಎಂ.ಹೆಚ್.ಆರ್.ಡಿ.ಗೆ ಸರಂಡರ್ ಮಾಡಲಾಗಿದ್ದು, ಪರಿಷ್ಕೃತ ದರಕ್ಕೆ ತಾತ್ವಿಕ ಒಪ್ಪಿಗೆ ಇದ್ದು, ಅಧಿಕೃತ ಆದೇಶವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿನ ಕೇಂದ್ರ ಸರ್ಕಾರದ ಅನುದಾನ ರೂ.604.20 ಲಕ್ಷಗಳ ಅನುದಾನವನ್ನು ಬಳಸಿಕೊಂಡು 137 ಅಡುಗೆ ಕೋಣೆಗಳನ್ನು ಹಾಗೂ ಯಾದಗಿರಿ ಜಿಲ್ಲೆಯಲ್ಲಿನ ರೂ.491.60 ಲಕ್ಷಗಳ ಅನುದಾನವನ್ನು(ಕೇಂದ್ರ ಸರ್ಕಾರದ ಅನುದಾನ ರೂ.171.60 ಲಕ್ಷಗಳು ಹಾಗೂ ಎಸ್.ಟಿ.ಪಿ. ವತಿಯಿಂದ ಬಿಡುಗಡೆ ಮಾಡಿರುವ ಅನುದಾನ ರೂ.320.00 ಲಕ್ಷಗಳು) ಬಳಸಿಕೊಂಡು 111 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ.
ಪಾತ್ರೆ ಪರಿಕರಗಳ ಖರೀದಿ ಬಗ್ಗೆ :
ಅಕ್ಷರ ದಾಸೋಹ ಕಾರ್ಯಕ್ರಮದಡಿ ಹೊಸ ಅಡುಗೆ ಕೇಂದ್ರಗಳಿಗೆ ಪಾತ್ರೆ ಪರಿಕರಗಳಿಗೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಡುಗೆ ಕೇಂದ್ರಗಳಿಗೆ ಪ್ರತಿ 5 ವರ್ಷಗಳಿಗೆ ಪಾತ್ರೆ ಪರಿಕರಗಳ ಬದಲಾವಣೆಗೆ ಕೇಂದ್ರ ಸರ್ಕಾರವು ಪ್ರತಿ ಅಡುಗೆ ಕೇಂದ್ರಕ್ಕೆ ರೂ. 5,000/-ರಂತೆ ಅನುದಾನ ನೀಡಿದ್ದು, ಅದರ ವಿವರ ಕೆಳಕಂಡಂತಿದೆ.
2015-16ನೇ ಸಾಲಿನವರೆಗೆ ಪಾತ್ರೆ ಪರಿಕರಗಳ ಖರೀದಿ ಮಾಹಿತಿ.
ಅಡುಗೆ ಸಿಬ್ಬಂದಿ ವಿವರ :
ಒಟ್ಟು ಕೇಂದ್ರ ಸರ್ಕಾರದಿಂದ 1,18,199 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,18,199 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಅಡುಗೆ ತಯಾರಿಸುವ ಸಂದರ್ಭದಲ್ಲಿ ಸುಟ್ಟಗಾಯಗಳಾದಲ್ಲಿ ರೂ.30,000/- ಗಳನ್ನು, ಅಂಗವಿಕಲತೆ ಉಂಟಾದಲ್ಲಿ ರೂ.75,000/- ಗಳನ್ನು ಮತ್ತು ಸುಟ್ಟಗಾಯಗಳಾಗಿ ಮರಣ ಹೊಂದಿದರೆ ರೂ. 1.00 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಅಗ್ನಿ ನಂದಕಗಳ ಅಳವಡಿಕೆ :
ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.
ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ.