ಕೇಳಬಹುದಾದ ಪ್ರಶ್ನೆಗಳು(FAQ)::
1) ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮ.ಉ.ಯೋ.ಯು ಅನುಷ್ಠಾನಗೊಂಡಿದೆಯೆ?
ಹೌದು, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಹಕಾರದೊಂದಿಗೆ ಹಮ್ಮಿಕೊಂಡಿದೆ.
2) ಅಡುಗೆ ತಯಾರಿಕಾ ವೆಚ್ಚ ಎಂದರೇನು?
ಬಿಸಿಯೂಟ ತಯಾರಿಸಲು ಬಳಸುವ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಉಪ್ಪು, ಅಡುಗೆ ಅನಿಲ, ತರಕಾರಿಗಳು, ಸಾಂಬಾರು ಪದಾರ್ಥಗಳಿಗೆ ಹಾಗೂ ಬಳಸುವ ವೆಚ್ಚವೇ ಅಡುಗೆ ತಯಾರಿಸುವ ವೆಚ್ಚ..3) ಕ.ಆ.ನಾ.ಸ.ನಿ.ನಿ.ಕ್ಕೆ ನೀಡುವ ಆಡಳಿತಾತ್ಮಕ ಶುಲ್ಕ ಮತ್ತು ಸೇವಾ ವೆಚ್ಚಗಳಿಗಿರುವ ವ್ಯತ್ಯಾಸವೇನು?
ಆಡಳಿತಾತ್ಮಕ ಶುಲ್ಕ :
ದಾಸ್ತಾನು ಮಳಿಗೆಗಳಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಮತ್ತು ಭಾ.ಆ.ನಿ.ದಿಂದ ದೊರೆಯುವ ಅಕ್ಕಿ/ಗೋಧಿಯ ಎತ್ತುವಳಿಗೆ ಕ.ಆ.ನಾ.ಸ.ನಿ.ನಿ.ಕ್ಕೆ ನೀಡುವ ಹಣ (ರೂ.12/-).
ಸೇವಾ ಶುಲ್ಕ:.
ಬೇಳೆ, ಎಣ್ಣೆ, ಉಪ್ಪು-ಇವುಗಳನ್ನು ಸಂಗ್ರಹಿಸಿ ,ದಾಸ್ತಾನು ಮಾಡಿ ಪೂರೈಸಲು ಕ.ಆ.ನಾ.ಸ.ನಿ.ನಿ.ಕ್ಕೆ ನೀಡುವ ಹಣ (ರೂ.10/-).
4) ಮ.ಉ.ಯೋ.ಯು ರಾಷ್ಟ್ರೀಯ ಹಬ್ಬಗಳಂದು ಮತ್ತು ಬೇಸಿಗೆ ರಜಾವಧಿಯಲ್ಲಿ ನೀಡಲ್ಪಡುತ್ತಿವೆಯೇ?
ಹೌದು, ಮ.ಉ.ಯೋ.ಯಡಿಯಲ್ಲಿ ಬಿಸಿಯೂಟವನ್ನು ಪ್ರತೀ ಶಾಲೆ ನಡೆದ ದಿನಗಳಂದು ಹಾಗೂ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನ, ಶಿಕ್ಷಕರ ದಿನ, ಗಾಂಧೀ ಜಯಂತಿ, ಮಕ್ಕಳ ದಿನಾಚರಣೆಯಂದು ನೀಡಲಾಗುತ್ತದೆ. ರಾಜ್ಯವು ಬರಪೀಡಿತವೆಂದು ಘೋಷಿಸಲ್ಪಡುವ ಜಿಲ್ಲೆ ಹಾಗು ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಹಾರವನ್ನು ನೀಡಲಾಗುತ್ತದೆ.5) ಸ್ವಯಂ ಸೇವಾ ಸಂಸ್ಥೆಗಳು ಮ.ಉಪಹಾರವನ್ನು ಉಚಿತವಾಗಿ ನೀಡುತ್ತಿವೆಯೇ?
ಇಲ್ಲ, ಸ್ವಯಂ ಸೇವಾ ಸಂಸ್ಥೆಗಳು ಸ್ವಯಂ ಪ್ರತಿನಿಧಿಯಾಗಿ ಸರ್ಕಾರದೊಂದಿಗೆ ಕೈ ಜೋಡಿಸುತ್ತಿವೆ. ಅವು ಅಡುಗೆ ಕೋಣೆ, ಸಾಗಾಣಿಕಾ ವಾಹನ ಮತ್ತು ಅಡುಗೆಯವರನ್ನು ಹೊಂದಿರಬೇಕು. ಸ್ವಯಂ ಸೇವಾ ಸಂಸ್ಥೆಗಳಿಗೆ 1 ರಿಂದ 5 ಮತ್ತು 6 ರಿಂದ 10 ನೇ ತರಗತಿಗಳಿಗೆ ತಲಾ 100 ಗ್ರಾಂ ಮತ್ತು 150 ಗ್ರಾಂ ಅಕ್ಕಿ ಹಾಗೂ ರೂ.2.69/- ಮತ್ತು ರೂ.4.03/- ಗಳಂತೆ ಅಡುಗೆ ತಯಾರಿಕಾ ವೆಚ್ಚವನ್ನು ನೀಡಲಾಗುತ್ತಿದೆ. ಅಡುಗೆ ತಯಾರಿಕಾ ವೆಚ್ಚವು ಪ್ರತಿ ವರ್ಷವೂ ಶೇ.7.5 ರಷ್ಟು ಹೆಚ್ಚಾಗುವುದು. ಸಾಗಾಣಿಕಾ ವೆಚ್ಚವಾಗಿ ಪ್ರತೀ ಕ್ವಿಂಟಾಲಿಗೆ ರೂ.75/-ನ್ನು ನೀಡಲಾಗುತ್ತಿದೆ. ಸ್ವ.ಸೇ.ಸಂ.ಗಳು ಯಾವುದೇ ಲಾಭಾಂಶಗಳನ್ನು ನಿರೀಕ್ಷಿಸದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ ಮತ್ತು ಸರ್ಕಾರದ ನಿಯಮದಂತೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕಿದೆ.