ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಆಚರಣೆಗಳು :
- ಅಡುಗೆ ಅನಿಲ ಬಳಸಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲಾಗುತ್ತಿದೆ.ಇದರಿಂದ ಶಾಲಾ ಪರಿಸರ ಸ್ವಚ್ಛವಾಗಿರುತ್ತದೆ.
- ಮಹಿಳೆಯರನ್ನು ಅಡುಗೆ ಸಿಬ್ಬಂದಿಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
- ಅಡುಗೆಯರ ನೇಮಕಾತಿ ಸಂದರ್ಭದಲ್ಲಿ ಪ.ಜಾ./ಪ.ವ. ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದೆ. ಅವರಲ್ಲೂ ವಿಧವೆಯರು ಹಾಗೂ ಜೇವನಾಧಾರವಿಲ್ಲದಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ.
- ಎಲ್ಲಾ ವಿದ್ಯಾರ್ಥಿಗಳಿಗೂ ಜಾತಿ-ಮತಗಳ ಬೇಧ-ಭಾವವಿಲ್ಲದೆ ಸರದಿ ಸಾಲಿನಲ್ಲಿ ಕುಳ್ಳಿರಿಸಿ, ಬಿಸಿಯೂಟವನ್ನು ಬಡಿಸಲಾಗುತ್ತದೆ. ಇದರಿಂದ ಸಹಕಾರ ಮನೋಭಾವ, ಸಮಾನತೆ ಮತ್ತು ಭಾವೈಕ್ಯತೆ ಮೂಡಲು ಸಹಕಾರವಾಗುತ್ತದೆ.
- ಊಟಕ್ಕೆ ಮೊದಲು ಮತ್ತು ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಕೈ ಮತ್ತು ತಟ್ಟೆ-ಲೋಟಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿಕೊಳ್ಳುವುದು.
- ಪ್ರತೀ ಶಾಲೆಯಲ್ಲಿ ತಾಯಿಯಂದಿರ ಸಮಿತಿ ಇದ್ದು, ತಾಯಿಯಂದಿರುವ ಬಿಸಿಯೂಟ ತಯಾರಿಕೆ ಹಾಗೂ ಬಡಿಸುವ ಸಂದರ್ಭದಲ್ಲಿ ಹಾಜರಿರುತ್ತಾರೆ.
- ಅಡುಗೆ ಸಿಬ್ಬಂದಿಯವರು ಸ್ವಚ್ಛತೆ, ಸುರಕ್ಷತೆ, ಮಿತವ್ಯಯ ಮತ್ತು ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ.
- ಸಾಂಬಾರು ಪದಾರ್ಥ ಮತ್ತು ತರಕಾರಿಗಳ ಖರೀದಿಗಾಗಿ ಮುಂಗಡವಾಗಿ ಅಡುಗೆ ತಯಾರಿಕಾ ವೆಚ್ಚವನ್ನು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಗೆ ಜಮಾ ಮಾಡಲಾಗುತ್ತಿದೆ.
- ಮಾರ್ಚ್-2011ರಿಂದ ಕುಂದು-ಕೊರತೆಗಳ ಪರಿಹಾರ ಕೋಶವು ತೆರೆಯಲ್ಪಟ್ಟಿದ್ದು, ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ತಲೆದೋರುವ ಸಮಸ್ಯೆಗಳು ಹಾಗೂ ದೂರುಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು.