ಕೇಂದ್ರ ಪ್ರಾಯೋಜಿತ ಐ.ಇ.ಡಿ.ಎಸ್.ಎಸ್ (ಇನ್‍ಕ್ಲೂಸಿವ್ ಎಜುಕೇಷನ್ ಫಾರ್ ಡಿಸೆಬಲ್ಡ್ ಇನ್ ಸೆಕೆಂಡರಿ ಸ್ಟೇಜ್) ಯೋಜನೆ :

ಕೇಂದ್ರ ಪ್ರಾಯೋಜಿತ ಐ.ಇ.ಡಿ.ಎಸ್.ಎಸ್ (ಇನ್‍ಕ್ಲೂಸಿವ್ ಎಜುಕೇಷನ್ ಫಾರ್ ಡಿಸೆಬಲ್ಡ್ ಇನ್ ಸೆಕೆಂಡರಿ ಸ್ಟೇಜ್) ಯೋಜನೆ:
ಪ್ರೌಢ ಶಾಲಾ ಹಂತದಲ್ಲಿ ವಿಕಲಚೇತನರಿಗೆ ಸಮನ್ವಯ ಶಿಕ್ಷಣವನ್ನು ಸಂಪೂರ್ಣವಾಗಿ ಕೇಂಧ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಒಂದು ಕಾರ್ಯಕ್ರಮವಾಗಿದೆ. ನ್ಯೂನತೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಪ್ರೌಢ ಶಿಕ್ಷಣವನ್ನು ಸಾಮಾನ್ಯ ಶಾಲೆಗಳಲ್ಲಿ ಪಡೆಯಲು ಅವಕಾಶ ಕಲ್ಪಿಸುವುದು, ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಹಾಗೂ ವಿಶೇಷ ಸಂಪನ್ಮೂಲ ಶಿಕ್ಷಕರ ಆಯ್ಕೆ, ಸಂಪನ್ಮೂಲ ಕೇಂಧ್ರಗಳ ಬಲವರ್ಧನೆ, ಪರಿಸರ ಸ್ನೇಹಿ ವಾತಾವರಣವನ್ನು ಕಲ್ಪಿಸುವುದು

ಐ.ಇ.ಡಿ.ಎಸ್.ಎಸ್.ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳು:

1. ವೈದ್ಯಕೀಯ ತಪಾಸಣೆ.
2. ಸಾಧನ ಸಲಕರಣೆಗಳು.
3. ಪುಸ್ತಕ ಮತ್ತು ಇತರೆ ಲೇಖನ ಸಾಮಗ್ರಿಗಳು
4. ಸಾರಿಗೆ ಹಾಗೂ ಎಸ್ಕಾರ್ಟ್ ಭತ್ಯೆ.
5. ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ.
6. ರೀಡರ್ ಭತ್ಯೆ.

ಇತರೆ ಅಂಶಗಳು :

• ಪರಿಸರ ಸ್ನೇಹಿ ವಾತಾವರಣ.
• ವಿಶೇಷ ಹಾಗೂ ಸಾಮಾನ್ಯ ಶಿಕ್ಷಕರಿಗೆ ತರಬೇತಿ.
• ಮುಖ್ಯಶಿಕ್ಷಕರಿಗೆ ಆಡಳಿತಾಧಿಕಾರಿಗಳಿಗೆ, ಪೋಷಕರಿಗೆ, ಪುನಶ್ಚೇತನ ತರಬೇತಿ.
• ತರಬೇತಿ ಸಂಸ್ಥೇಗಳ ಬಲವರ್ಧನೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಕಾರ.
• ಸಂಪನ್ಮೂಲ ಕೊಠಡಿಗೆ ಸಾಮಗ್ರಿಗಳು.
• ವಿಶೇಷ ಸಂಪನ್ಮೂಲ ಶಿಕ್ಷಕರ ಆಯ್ಕೆ.
• ಸಂಶೋಧನೆ, ಮೇಲುಸ್ತುವಾರಿ ಹಾಗೂ ಮೌಲ್ಯಮಾಪನ.