ನಿರ್ದೇಶನಾಲಯದ ವ್ಯಾಪ್ತಿ :
• ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಮತೀಯ ಹಾಗೂ ಭಾಷಾ ಅಲ್ಪಸಂಖ್ಯಾತ ಆಡಳಿತ ಮಂಡಳಿಯವರು ನಡೆಸುತ್ತಿರುವ ಶಾಲೆಗಳನ್ನು ಭಾಷಾ/ಮತೀಯ ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಿಸುವುದು.
• ಅಲ್ಪಸಂಖ್ಯಾತ ಶಾಲೆಗಳ ಭೇಟಿ ಮತ್ತು ತಪಾಸಣೆ ನಡೆಸುವುದು.
• ಅಲ್ಪಸಂಖ್ಯಾತ ಶಾಲೆಗಳಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಕ್ರೋಢೀಕರಣ.
• ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಪ್ರದೇಶಗಳನ್ನು ಗುರ್ತಿಸಿ ಅಂತಹ ಪ್ರದೇಶಗಳಲ್ಲಿ ಹೊಸ ಅಲ್ಪಸಂಖ್ಯಾತ ಶಾಲೆಗಳನ್ನು ಪ್ರಾರಂಭಿಸುವುದು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
• ಅಲ್ಪಸಂಖ್ಯಾತ ಶಾಲಾ ಶಿಕ್ಷಕರುಗಳಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರಸಂಪನ್ಮೂಲ ಕೇಂದ್ರಗಳ ಮೂಲಕ ಪುನಶ್ಚೇತನ ತರಬೇತಿಗಳನ್ನು ನೀಡುವುದು.
• ರಾಜ್ಯದಲ್ಲಿನ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಆಂಗ್ಲೋ-ಭಾರತೀಯ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸೌಲಭ್ಯ ನೀಡಲಾಗುತ್ತಿದೆ.
• ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
• ಅಲ್ಪಸಂಖ್ಯಾತ ಶಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳಿಗೆ ಸಹಕಾರ ನೀಡುವುದು.
• ರಾಜ್ಯದಲ್ಲಿನ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷೆಗಳ ಶಿಕ್ಷಣ ಸಂಯೋಜಕರ ರಾಜ್ಯಮಟ್ಟದ ಸಭೆನಡೆಸಿ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡುವುದು.
ಈ ನಿರ್ದೇಶನಾಲಯವು ಮೇಲ್ಕಂಡ ಕಾರ್ಯಗಳನ್ನೊಳಗೊಂಡಂತೆ ಕೆಳಕಂಡ ವಿಭಾಗಗಳ ಕಾರ್ಯಗಳನ್ನು ನಿರ್ವಹಿಸುತ್ತಿದೆ :
• ಹಿಂದಿ ಮತ್ತು ಅರೇಬಿಕ್ ಶಾಲೆಗಳು.
• ಕೇಂದ್ರ ಪ್ರಾಯೋಜಿತ ಎಸ್.ಪಿ.ಕ್ಯೂ.ಇ.ಎಂ (ಸ್ಕೀಂ ಫಾರ್ ಪ್ರೋವೈಡಿಂಗ್ ಕ್ವಾಲಿಟಿ ಎಜುಕೇಷನ್ ಇನ್ ಮದರಸಾಸ್) ಯೋಜನೆ)
• ಕೇಂದ್ರ ಪ್ರಾಯೋಜಿತ ಐ.ಇ.ಡಿ.ಎಸ್.ಎಸ್ (ಇನ್‍ಕ್ಲೂಸಿವ್ ಎಜುಕೇಷನ್ ಫಾರ್ ಡಿಸೆಬಲ್ಡ್ ಇನ್ ಸೆಕೆಂಡರಿ ಸ್ಟೇಜ್) ಯೋಜನೆ.
• ಕೇಂದ್ರ ಪ್ರಾಯೋಜಿತ ಐ.ಡಿ.ಎಂ.ಐ (ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಇನ್ ಮೈನಾರಿಟಿ ಇನ್ಸಟಿಟ್ಯೂಷನ್) ಯೋಜನೆ.
• ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ).