ನಿರ್ದೇಶನಾಲಯದ ಬಗ್ಗೆ :

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆಇಡಿ 125 ಎಂಇಎಸ್86 ದಿನಾಂಕ:26.05.1987ರಲ್ಲಿ ರಾಜ್ಯದಲ್ಲಿನ ಅಲ್ಪಸಂಖ್ಯಾತ ಶಾಲೆಗಳ ಮೇಲುಸ್ತುವಾರಿ, ಶಿಕ್ಷಣ ಸಮಸ್ಯೆಗಳ ಪರಿಹಾರ, ಸಂವಿಧಾನ ಹಕ್ಕುಗಳ ಪೂರೈಕೆ ಇವುಗಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಂದು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಅವಶ್ಯಕವೆಂದು 1987-88ನೇ ಸಾಲಿನಿಂದ ಜಾರಿಗೆ ಬರುವಂತೆ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವನ್ನು ಸರ್ಕಾರ ಸ್ಥಾಪಿಸಲಾಗಿದೆ. ಈ ನಿರ್ದೇಶನಾಲಯವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ.