ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನ :

ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮತ್ತು ನಿಯಂತ್ರಣವು ಅನುದಾನ ಸಂಹಿತೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಆಡಳಿತವನ್ನು ಸ್ಥಿರಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಶಾಸಕಾಂಗವು ದಿ:20-10-1993ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1993(1883)ರ ಕಾಯ್ದೆ ರಚಿಸಿ ಭಾರತದ ರಾಷ್ಟ್ರಪತಿಗಳ ಅನುಮೋದನೆ ಪಡೆದಿರುತ್ತದೆ.

ಈ ಶಿಕ್ಷಣ ಕಾಯ್ದೆಯಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಸಂಘಟನೆ, ಅಭಿವೃದ್ಧಿ, ಶಿಸ್ತು, ಸಾಮರಸ್ಯ ಸೃಷ್ಟಿಸುವ ದೃಷ್ಟಿಯಿಂದ ಉತ್ತಮ ಸಂಘಟನೆಯೊಂದಿಗೆ ಆರೋಗ್ಯಕರ ನಿಯಂತ್ರಣ ಗುಣಮಟ್ಟದ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಯೋಜಿತ ಅಭಿವೃದ್ಧಿಗೆ ಪರಿಗಣಿಸಲಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ, ವೈಜ್ಞಾನಿಕ ಮತ್ತು ಜಾತ್ಯಾತೀತ ದೃಷ್ಟಿಕೋನವನ್ನು ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಈ ಕಾಯ್ದೆಯಲ್ಲಿ ಆಯಂತ್ರಿಸಲಾಗಿದೆ

  • ಈ ಕಾಯ್ದೆಯಡಿ ಶಾಲೆಗಳ ನೊಂದಣಿ ಹಾಗೂ ಮಾನ್ಯತೆ.
  • ನೇಮಕಾತಿಗಳನ್ನು ಅನುಮೋದಿಸುವುದು ಹಾಗೂ ಅನುದಾನ ಮಂಜೂರು ಮಾಡುವುದು.
  • ಶಾಲಾ ಆಡಳಿತ ಮಂಡಳೀಯ ಆಡಳಿತಾತ್ಮಕ ಅಧಿಕಾರಿಗಳು ಹಾಗೂ ನಿಯಂತ್ರಣಗಳು.
  • ಆಡಳಿತ ಮಂಡಳಿ ಮತ್ತು ಶಿಕ್ಷಕರ ನಡುವಿನ ವಿವಾದವನ್ನು ಬಗೆಹರಿಸಿಕೊಳ್ಳುವುದು.
  • ಶಿಕ್ಷಕರ ವರ್ಗಾವಣೆ.
  • ಶಾಲೆಗಳ ನೋಂದಣಿ ಹಾಗೂ ಮಾನ್ಯತೆಯನ್ನು ರದ್ದುಗೊಳಿಸುವುದು.
  • ಸಿಬ್ಬಂದಿಯ ಸೇವಾ ನಿಯಮಾವಳಿಗಳು.
  • ಅಪೀಲುಗಳ ಸಕ್ಷಮ ಪ್ರಾಧಿಕಾರ.
    • ಜಿಲ್ಲಾ ಮಟ್ಟದಲ್ಲಿ ಇ.ಎ.ಟಿ.
    • ರಾಜ್ಯ ಮಟ್ಟದಲ್ಲಿ ಮೇಲ್ಮನವಿ ಪ್ರಾಧಿಕಾರ ನಿರ್ದೇಶಕರು, ಆಯುಕ್ತರು ಇವರಲ್ಲಿ ಅಪೀಲು ಸಲ್ಲಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳುವುದು.