ಪರಿಚಯ
ಕಲಾ ಶಿಕ್ಷಣವು ಕೇವಲ ಕಲಾ ಶಿಕ್ಷಣವಲ್ಲ. ಜೀವನದ ಸಮರಸಗಳನ್ನು ಹೊಂದಿರುವ ಕಲೆ. ಕಲಾ ಶಿಕ್ಷಣವು ಲಲಿತಕಲೆಗಳಾದ ಚಿತ್ರಕಲೆ, ಪೇಂಟಿಂಗ್(ವರ್ಣಚಿತ್ರ), ಸಂಗೀತ, ನೃತ್ಯ ಮತ್ತು ನಾಟಕ, ಬೊಂಬೆ ತಯಾರಿಕೆ ಮುಂತಾದ ಪ್ರಕಾರಗಳಿಂದ ಕೂಡಿದೆ.
ಕಲಾ ಶಿಕ್ಷಣದ ಮೂಲ ಉದ್ದೇಶ ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆಯುವುದು. ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಆದ್ದರಿಂದ ಕಲಾ ಶಿಕ್ಷಣವನ್ನು ಸೃಜನತೆಗೆ ಅನುಗುಣವಾಗಿ ಕ್ರಮಬದ್ದವಾಗಿ ನೀಡಬೇಕಾಗುತ್ತದೆ. ಇದರಿಂದ ಜೀವನದ ಸಾರ್ಥಕತೆಗೆ ಸ್ವಂತ ಉದ್ಯೋಗಕ್ಕೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಕಲಾ ಶಿಕ್ಷಣಕ್ಕೆ ಪೂರಕವಾದ ಪಠ್ಯ ವಿಷಯವನ್ನು ಸಿದ್ದಪಡಿಸಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರನ್ನು ಸುಗಮಹಾದಿಯಲ್ಲಿ ಮುನ್ನಡೆಯುವಂತೆ ಮಾಡಿದೆ.
ಪ್ರಮುಖ ಉದ್ದೇಶಗಳು :
- ಕಲಾ ಶಿಕ್ಷಣದ ವಿವಿಧ ಮಾಧ್ಯಮಗಳನ್ನು ರಸವತ್ತಾಗಿ ಅರ್ಥಪೂರ್ಣವಾಗಿ ಬೋಧಿಸುವ ತಂತ್ರಗಾರಿಕೆ ದೃಶ್ಯ ಮಾಧ್ಯಮದಲ್ಲಿ ಬಿಂಬಿಸಲು ನೆರವಾಗುತ್ತದೆ.
- ಕಿವುಡ ಮತ್ತು ಮೂಗ ವಿದ್ಯಾರ್ಥಿಗಳೂ ಸಹಾ ಈ ಕಲಾ ಶಿಕ್ಷಣವನ್ನು ಕಲಿಯಲು ಅರ್ಹರಾಗಿರುತ್ತಾರೆ.
ಪಠ್ಯಕ್ರಮ
10ನೇ ತರಗತಿ ಕಲಾ ಶಿಕ್ಷಣ ಮಾದರಿ ಪ್ರಶ್ನೆ ಪತ್ರಿಕೆ.
9ನೇ ತರಗತಿ ಕಲಾ ಶಿಕ್ಷಣ ಮಾದರಿ ಪ್ರಶ್ನೆ ಪತ್ರಿಕೆ.
8ನೇ ತರಗತಿ ಕಲಾ ಶಿಕ್ಷಣ ಮಾದರಿ ಪ್ರಶ್ನೆ ಪತ್ರಿಕೆ.
10ನೇ ತರಗತಿ ಕಲಾ ಶಿಕ್ಷಣ ಮಾದರಿ ಪ್ರಶ್ನೆ ಪತ್ರಿಕೆ.
ಸುತ್ತೋಲೆಗಳು
ಕ್ರ ಸಂ | ವಿವರ | ಅಳವಡಿಸಿದ ದಿನಾಂಕ |
---|---|---|
06 |
ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು ಕೈಗೊಳ್ಳಬೇಕಾದ ಬೋಧನಾ ಕಾರ್ಯಚಟುವಟಿಕೆಗಳು. | 03-06-2016 |
05 |
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದಲ್ಲಿ ಕಲಾ ಶಿಕ್ಷಣ ಮತ್ತು ಕಾರ್ಯಾನುಭವ. | 07-02-2015 |
04 |
ಶಾಲೆಗಳ ತಪಾಸಣೆ ನಮೂನೆ. | |
03 |
ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನೆ. | |
02 |
ಪ್ರೌಢ ಶಿಕ್ಷಣದಲ್ಲಿ ಕಲಾ ಶಿಕ್ಷಣದ ಪ್ರಾಮುಖ್ಯತೆ. | |
01 |
ಪ್ರೌಢ ಶಿಕ್ಷಣದಲ್ಲಿ ಚಿತ್ರಕಲಾ ವಿಭಾಗದ ಶುಲ್ಕ ನಿಗದಿ ಬಗ್ಗೆ ವಿವರ. |